Tuesday, June 30, 2009

ಅಂಧಾ ದರ್ಬಾರ್..


ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ದರ್ಬಾರ್ ಬಗ್ಗೆ "ವಿಜಯ ಕರ್ನಾಟಕ’ ಪತ್ರಿಕೆ ವರದಿ ಮಾಡಿದೆ. ಜಿಲ್ಲಾ ಪಂಚಾಯಿತಿಯ ಬಗ್ಗೆ ಇತ್ತೀಚೆಗೆ ಹೇಳುವವರು ಕೇಳುವವರ‍್ಯಾರು ಇಲ್ಲದಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಅಭಿವೃದ್ಧಿ ಅಷ್ಟಕಷ್ಟೇ.ಇಂತಹದರಲ್ಲಿ ಜಿಲ್ಲಾ ಪಂಚಾತಿಯಿ ಅಧಿಕಾರಿಗಳು ಪಂಚಾಯಿತಿಗಳಲ್ಲಿ ಇರುವ ಸುಸ್ಥಿತಿ ವಾಹನಗಳನ್ನು ತಮ್ಮ "ಕಾರು-ಬಾರಿ"ಗಾಗಿ ದುಸ್ಥಿತಿಗೊಳಿಸುತ್ತಿರುವುದು ನಿಜಕ್ಕೂ ಜಿ.ಪಂ. ದುಸ್ಥಿತಿಯ ಸಂಕೇತ. ಅಲ್ಲಿನ ಅಧಿಕಾರಿಗಳಿಗೆಲ್ಲಾ ಖಾಸಗಿವಾಹನವೆಂದರೆ ಅದೇನೂ ಪ್ರೀತಿ..!ಅದಕ್ಕಾಗಿಯೇ ಇದ್ದ ವಾಹನಗಳನ್ನು ಷೆಡ್‌ಗೆ ತಳ್ಳಿ ತಮ್ಮ ಆರಾಮದಾಯಕ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಜಿ.ಪಂ. ಮುಂದೆ ನಿಲ್ಲಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.ವಿಶೇಷವೆಂದರೆ ಜಿಲ್ಲಾ ಪಂಚಾಯಿತಿಯ ಮುಖ್ಯಸ್ಥರಾಗಿರುವ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕರಿಗೇ ಇವೆಲ್ಲಾ ಗೊತ್ತಿಲ್ಲ ಎನ್ನುವುದು ಬೇಸರದ ಸಂಗತಿ.ಸುದ್ದಿಯ ಚಿತ್ರದ ತುಣಕು ಇದರ ಜೊತೆಯಲ್ಲಿದೆ.ನೀವೇ ಹೇಳಿ